AI ಮತ್ತು ಅವಳು

 ಏಯ್ ಮತ್ತು ಅವಳು

ಏಯ್ (AI) ಹಾಡೊಂದ ಹಾಡೇ?

ಯಾವ ಹಾಡನ್ನು ಹಾಡಲಿ?

ನಿದ್ದೆ ಬರುವಂಥ ಹಾಡು!

ಮಂದ ಧ್ವನಿಯಲಿ 

ನೊಂದ ಪದದಲಿ 

ಹಾಡಿತೊಂದು ಹಾಡನು ಏಯ್ (AI)

ಕದ್ದೂ ನಿದಿರೆ ಬರಲಿಲ್ಲವೆನಗೆ 

ಹೋಗಲಿ ಕಥೆಯನಾದರೂ ಹೇಳಮ್ಮ 

ನಿದಿರೆ ಬರುವ ಕಥೆ 

ಕಥೆಯು ಮುಗಿದೇ ಹೋಯಿತು 

ಇದ್ದ ನಿದಿರೆಯು ಓಡಿತು 

ಅವಳು ಬಂದಳು ಒಳಗೆ

ನಗುವ ಬೀರುತ

ತಂಪು ಸೂಸುತ

ನಿದ್ದೆ ಮಾಡಲಿಲ್ಲವೆಯೆಂದಳು 

ನೀನು ಬರಬೇಕಲ್ಲವೆಂದೆ 

ಈಗ ಬರಿಸಲೇ ನಿಮಗೆ ನಿದ್ದೆ?

ನಾನಾಗಲೇ ಅವಳ ಮಡಿಲಲ್ಲಿ 

ಮಲಗಿದ್ದೆ!!

Comments

Popular Posts